<ಮಂಕುತಿಮ್ಮನ ಕಗ್ಗ
<ಮಂಕುತಿಮ್ಮನ ಕಗ್ಗ-ಕಂತು ೮; ಪದ್ಯ ೨೧೧ ರಿಂದ ೨೪೦;
<ಮಂಕುತಿಮ್ಮನ ಕಗ್ಗ-ಕಂತು ೭.ಪದ್ಯ ೧೮೦ ರಿಂದ ೨೧೦ ವರೆಗೆ:ಅರ್ಥಸಹಿತ.
ಮಂಕುತಿಮ್ಮನ ಕಗ್ಗ; :ಅರ್ಥಸಹಿತ
ಪದ್ಯ – ೨೧೧
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ
ಕೊನೆಯಲ್ಲಿ? ಚಿಂತಿಸೆಲೊ – ಮಂಕುತಿಮ್ಮ
 ತಣಿಸಲದನೊಗೆಯುವುದು = ತಣಿಸಲು + ಅದನು + ಒಗೆಯುವುದು// ಮನುಜನೇಳಿಗೆಯದರಿನ್= ಮನುಜನ+ಏಳಿಗೆ+ಅದರಿನ್// ಮನಸಿನೇಳಿಗೆಗೆ = ಮನಸಿನ+ ಏಳಿಗೆಗೆ.
 ಮನುಷ್ಯನ ಮನಸ್ಸು ಬೆಳೆದಂತೆಲ್ಲ ಅವನ ಮನಸ್ಸಿನ ಹಸಿವೂ ಸಹ ಬೆಳೆಯುತ್ತದೆ. ಆ ಹಸಿವನ್ನು ಇಂಗಿಸಲು ಮನಸ್ಸು ಬಗೆ ಬಗೆಯ ಉಪಾಯಗಳನ್ನು ಹುಡುಕುತ್ತದೆ. ಈ ರೀತಿಯ ಹಸಿವು ಮತ್ತು ಆ ಹಸಿವಿನ ತಣಿಯುವಿಕೆಯಿಂದ ಮನುಷ್ಯನ ಬಾಹ್ಯ ಜೀವನ ಉತ್ತಮವಾಗಬಹುದು.ಈ ರೀತಿ ಆಸೆ ಪಡುವುದು, ಆ ಆಸೆಗಳನ್ನು ತೀರಿಸಿಕೊಳ್ಳಲು ಹಲವಾರು ಉಪಾಯಗಳನ್ನು ಮಾಡುವುದು ಮತ್ತು ಈ ಉಪಾಯಗಳಿಂದ ಉನ್ನತ ಸ್ಥಾನ ಹೊಂದುವುದು.
ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.
♠೫೫೫೫೫೫೫೫೫೫೫೫೫೫೫೫೫೫♠
-೦♦♦♣♣♣♣♣♣♣♣♣♣♣♣♦♦೦-
ನೋಡಿ
<ಮಂಕುತಿಮ್ಮನ ಕಗ್ಗ-ಕಂತು ೭. ಅರ್ಥ ಸಹಿತ
ಮಂಕುತಿಮ್ಮನ ಕಗ್ಗ-ಕಂತು ೯.> ಅರ್ಥ ಸಹಿತ
ನೋಡಿ

ಉಲ್ಲೇಖ

 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ